ಬೆಂಗಳೂರು ಉತ್ತರ: ಬ್ರ್ಯಾಟ್ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್;
ಶುಕ್ರವಾರ ಸಂಜೆ 4ಗಂಟೆಗೆ ಬೆಂಗಳೂರಿನ ಶೆರಟನ್ ಹೊಟೇಲ್ ನಲ್ಲಿ ಖ್ಯಾತ ನಿರ್ದೇಶಕ ಶಶಾಂಕ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಬ್ರ್ಯಾಟ್ ಸಿನಿಮಾದ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. ಮಂಜುನಾಥ್ ವಿ ಕಂದಕೂರ್ ನಿರ್ಮಾಣದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ್ದು, ಮನೀಷ ನಾಯಕಿಯಾಗಿದ್ದಾರೆ. ಅಚ್ಚುತ ಕುಮಾರ್, ಮಾನಸಿ ಸುಧೀರ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಅಂದಹಾಗೆ, ಬ್ರ್ಯಾಟ್ ಸಿನಿಮಾ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ.