ಚಾಮರಾಜನಗರ: ಸುಳ್ಳು ಕೇಸ್ ಹಾಕಿದ್ದಾರೆಂದು ನಗರದಲ್ಲಿ ಠಾಣೆ ಮುಂದೆ ವೀರನಪುರ ಗ್ರಾಮಸ್ಥರ ಆಕ್ರೋಶ
ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ದೇಗುಲ ಪ್ರವೇಶ ನಿರಾಕರಣೆ ಸಂಬಂಧ ನಡೆದ ಶಾಂತಿ ಸಭೆ ವೇಳೆ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಹಾಕಿದರೆಂದು ಸುಳ್ಳು ಕೇಸ್ ಹಾಕಲಾಗಿದೆ ಎಂದು ವೀರನಪುರ ಗ್ರಾಮಸ್ಥರು ನಗರದ ಪಟ್ಟಣ ಠಾಣೆ ಮುಂದೆ ಭಾನುವಾರ ಧರಣಿ ನಡೆಸಿ ಆಕ್ರೋಶ ಹೊರಹಾಕಿದರು. ಗ್ರಾಮದ ದೇವಾಲಯದ ಜೀರ್ಣೋದ್ಧಾರಕ್ಕೆ ಎಲ್ಲಾ ಸಮುದಾಯದವರು ಒಟ್ಟಾಗಿ ಗುದ್ದಲಿಪೂಜೆ ನೆರವೇರಿಸಲು ನಿರ್ಧರಿಸಿದ್ದೇವೆ. ಗ್ರಾಮದ ಎನ್.ಶಿವಕುಮಾರ್ ಎಂಬುವರು ಒಂದು ಸಮುದಾಯದ 17 ಮಂದಿ ವಿರುದ್ಧ ಅ.17ರಂದು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಸುಳ್ಳು ದೂರು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.