ದೇವದುರ್ಗ: ಪಟ್ಟಣದ ತಾಲೂಕ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ಸಮೀಕ್ಷೆಗೆ ಶಾಸಕಿ ಜಿ ಕರೆಮ್ಮ ನಾಯಕ ಚಾಲನೆ
ರಾಜ್ಯಾದ್ಯಂತ ಸೆಪ್ಟೆಂಬರ್ 22 ರಿಂದ ಹಿಂದುಳಿದ ವರ್ಗಗಳ ಆಯೋಗದಿಂದ ಆರಂಭಗೊಂಡಿರುವ ಜಾತಿವಾರು ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆಯ ಅಂಗವಾಗಿ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ತಾಲೂಕ ಕಚೇರಿಯಲ್ಲಿ ಕಾರ್ಯಕ್ರಮಕ್ಕೆ ಶಾಸಕಿ ಜಿ ಕರೆಮ್ಮ ನಾಯಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಗಣತಿ ದಾರರು ಸಮರ್ಪಕವಾಗಿ ಮಾಹಿತಿ ಸಂಗ್ರಹಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸಲಹೆ ನೀಡಿದರು ಈ ಸಂದರ್ಭದಲ್ಲಿ ತಹಸಿಲ್ದಾರ್ ನಾಗರತ್ನ ಕಟ್ಟಿಮನಿ, ಅಮರೇಶ ಬಿರೆದಾರ, ಹಿಂದುಳಿದ ವರ್ಗಗಳ ತಾಲೂಕ ಅಧಿಕಾರಿ ಬಾಬುರಾವ್ ಸೇರಿದಂತೆ ಇತರರು ಭಾಗವಹಿಸಿದ್ದರು.