ಬೆಂಗಳೂರು ಉತ್ತರ: ದೇಗುಲಕ್ಕೆ ನುಗ್ಗಿ ಕಾಲಲ್ಲಿ ಮೂರ್ತಿಗೆ ಒದ್ದು ಹುಚ್ಚಾಟ
ದೇವರ ಬೀಸನಹಳ್ಳಿಯ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಚೇತನ ಕಬೀರ್ ಎಂಬಾತ ಚಪ್ಪಲಿ ಸಮೇತ ಗರ್ಭಗುಡಿಗೆ ನುಗ್ಗಿ ದೇವರ ವಿಗ್ರಹಕ್ಕೆ ಒದ್ದು, ಎಳೆದಾಡಿದ ಘಟನೆ ನಡೆದಿದೆ. ಬೆಳಗ್ಗೆ 8.30ರ ಸುಮಾರಿಗೆ ಇಸ್ಲಾಂ ಧರ್ಮದ ಪರ ಘೋಷಣೆ ಕೂಗುತ್ತಾ ಬಂದಿದ್ದ ಆರೋಪಿ, ಮೊದಲು ಗಣಪತಿ ದೇವರ ಫೋಟೊಗೆ ಹಾನಿ ಮಾಡಿ, ಬಳಿಕ ದೇವಸ್ಥಾನದ ಗರಡುಗಂಬಕ್ಕೆ ಕಲ್ಲಿನಿಂದ ಹೊಡೆದು, ದೇವರ ಮೂರ್ತಿಯನ್ನು ಎಳೆದಾಡಿದ್ದಾನೆ ಎಂದು ವರದಿಯಾಗಿದೆ.