ಔರಾದ್: ಯನಗುಂದಾದಲ್ಲಿ ಅಕ್ರಮವಾಗಿ ಬೆಳೆದ 89,200 ಮೌಲ್ಯದ ಜಪ್ತಿ ಆರೋಪಿತರ ವಿರುದ್ಧ ಚಿಂತಾಕಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು
Aurad, Bidar | Nov 9, 2025 ತಾಲೂಕಿನ ಚಿಂತಾಕಿ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಯನಗುಂದಾದಲ್ಲಿ ಹೊಲ ಒಂದರಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ ₹ 89, 200 ಮೌಲ್ಯದ ಗಾಂಜಾ ಗಿಡಗಳನ್ನು ಚಿಂತಾಕಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ನಿರ್ದೇಶನದ ಮೇರೆಗೆ ಖಚಿತ ಮಾಹಿತಿ ಆದರ್ಶ ದಾಳಿ ನಡೆಸಿರುವ ನಿರೀಕ್ಷಕ ರಘುವೀರಸಿಂಗ್ ಠಾಕೂರ್, ಪಿಎಸ್ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಯವರು ಸೇರಿ ಅಕ್ರಮವಾಗಿ ಬೆಳೆದ ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ಧ ಚಿಂತಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ಭಾನುವಾರ ಮಧ್ಯಾಹ್ನ 2ಕ್ಕೆ ತಿಳಿಸಲಾಗಿದೆ.