ರಾಯಚೂರು: ರಾಯಚೂರು ಹೈದರಾಬಾದ್ ಹೆದ್ದಾರಿ ಟ್ರಾಫಿಕ್ ಜಾಮ್ ಪರದಾಟ
ರಾಯಚೂರು ಹೈದರಾಬಾದ್ ಹೆದ್ದಾರಿ ಟ್ರಾಫಿಕ್ ಜಾಮ್ ಉಂಟಾಗಿ ಎರಡು ಗಂಟೆಗಳ ಕಾಲ ಪ್ರಯಾಣಿಕರು ಪರದಾಡಿದ ಘಟನೆ ಜರುಗಿದೆ. ರಾಯಚೂರು ನಗರದ ಶಕ್ತಿನಗರ ಮೂಲಕ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಹತ್ತಿ ತುಂಬಿದ ವಾಹನಗಳು ಸಾಕಷ್ಟು ಬಂದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ. ಒ ಪ್ಯಾಕ್ ಆಸ್ಪತ್ರೆ ಬಳಿಯ ರೈಲ್ವೆ ಮೇಲ್ ಸೇತುವೆಯಿಂದ ನಗರದ ಎಸ್ ಪಿ ಕಚೇರಿ ವರೆಗೆ ಸುಮಾರು 2 km ಟ್ರಾಫಿಕ್ ಜಾಮ್ ಉಂಟಾಗಿದೆ. ಕೂಡಲೆ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸ್ರು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.