ವಿಜಯಪುರ: ಭೂಸಂತ್ರಸ್ಥರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು, ನಗರದಲ್ಲಿ ರೈತ ಮುಖಂಡ ಸಂಗಮೇಶ್ ಸಗರ್ ಆಗ್ರಹ
ರಾಜ್ಯ ಸರ್ಕಾರ ಆಲಮಟ್ಟಿಯ ಕೃಷ್ಣ ಜಲಾಶಯದ ಎತ್ತರಕ್ಕೆ ನಿರ್ಣಯ ತೆಗೆದುಕೊಂಡಿದ್ದು ಸ್ವಾಗತಾರ್ಹ ಆದರೆ ಭೂಮಿ ಕಳೆದುಕೊಳ್ಳುವ ರೈತರಿಗೆ ಸರ್ಕಾರ ಕೇವಲ 40 ಲಕ್ಷ ರೂಪಾಯಿ ಪರಿಹಾರ ನೀಡುತ್ತಿರುವುದು ಖಂಡನೆ, ಭೂಮಿ ಕಳೆದುಕೊಳ್ಳುವ ರೈತರಿಗೆ ಸುಮಾರು 80 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಅಂದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ ಎಂದು ವಿಜಯಪುರದಲ್ಲಿ ಮಂಗಳವಾರ ಸಾಯಂಕಾಲ 5ಗಂಟೆ ಸುಮಾರಿಗೆ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ್ ಸಗರ್ ಮಾಧ್ಯಮ ಮೂಲಕ ಸರ್ಕಾರಕ್ಕೆ ಅಗ್ರಹಿಸಿದರು.