ಬೆಂಗಳೂರು ಉತ್ತರ: ಕರ್ನಾಟಕ ಸರ್ಕಾರ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ 'ಋತುಚಕ್ರ ರಜೆ'ಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ: ಶೋಭಾ ಕರಂದ್ಲಾಜೆ
ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ 'ಋತುಚಕ್ರ ರಜೆ'ಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ; ಇದನ್ನು ಸರ್ಕಾರ ಪರಿಣಾಮಕಾರಿ ಜಾರಿಗೊಳಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು, ಕರ್ನಾಟಕ ಸರ್ಕಾರವು ಮಾಸಿಕ ಋತುಚಕ್ರದ ರಜೆ ನೀತಿಯನ್ನು ಜಾರಿಗೆ ತರಲು ನಿರ್ಧರಿಸಿರುವುದು ಒಳ್ಳೆಯ ಕ್ರಮವಾಗಿದ್ದು, ಈ ನೀತಿಯ ಅನ್ವಯ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನದ ವೇತನ ಸಹಿತ ರಜೆ ಸಿಗಲಿದೆ. ಇದು ಬರೀ ಸರ್ಕಾರಿ ನೌಕರಿಗಷ್ಟೇ ಅಲ್ಲ; ಗಾರ್ಮೆಂಟ್ಸ್ ಸೇರಿದಂತೆ ಎಲ್ಲ ಖಾಸಗಿ ವಲಯದ ಉದ್ಯೋಗದಾತರಿಗೂ ಈ ನೀತಿಯನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸೂಚಿಸಬೇಕಿದೆ ಎಂದು ಹೇಳಿದರು.