ಮಾಚಿದೇವ ಮಡಿವಾಳ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ದೊಡ್ಡಬಳ್ಳಾಪುರ ನಮ್ಮ ಸಮಾಜದ ಬಂದುಗಳ ಸಲಹೆ ಸೂಚನೆ ಮಾರ್ಗವನ್ನು ಪಡೆದು ಕೊಂಡು ಕಾನೂನು ಬದ್ದವಾಗಿ ಶಿಷ್ಟಚಾರವಾಗಿ ಸಮಾಜದ ಅಭಿವೃದ್ಧಿ ಕೆಲಸವನ್ನು ಮಾಡುತ್ತೇನೆ ಎಂದು ಶ್ರೀ ಮಾಚಿದೇವ ಮಡಿವಾಳ ಸಂಘದ ನೂತನ ತಾಲ್ಲೂಕು ಅಧ್ಯಕ್ಷ. ಜಿ.ರಂಗಸ್ವಾಮಿ ಹೇಳಿದರು. ಅವರು ನಗರದ ಕನ್ನಡ ಜಾಗೃತಿ ಪರಿಷತ್ತು ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.