ಬೆಂಗಳೂರು ಉತ್ತರ: ಬೆಂಗಳೂರಲ್ಲಿ ಎರಡು ದಿನಗಳ 'ಆರ್ಕಿಡ್ ಶೋ 2025'ಕ್ಕೆ ಚಾಲನೆ
ದಿ ಆರ್ಕಿಡ್ ಸೊಸೈಟಿ ಆಫ್ ಕರ್ನಾಟಕ ಸಂಸ್ಥೆ, ಇಂಡೋ ಅಮೆರಿಕನ್ ಹೈಬ್ರಿಡ್ ಸೀಡ್ಸ್ ಸಹಯೋಗದಲ್ಲಿ ಆಯೋಜಿಸಲಾಗಿರುವ 'ಆರ್ಕಿಡ್ ಶೋ 2025'ಕ್ಕೆ ಶನಿವಾರ ನಗರದಲ್ಲಿ ಚಾಲನೆ ನೀಡಲಾಯಿತು. ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಈ ಶೋ ಆರಂಭವಾಗಿದೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಈ ಶೋ ನಡೆಯಲಿದ್ದು, ಹೊಸದಾಗಿ ಬೆಳೆಸಿದ ಹೈಬ್ರಿಡ್ ಆರ್ಕಿಡ್ಗಳನ್ನು ಈ ಪ್ರದರ್ಶನದಲ್ಲಿ ವೀಕ್ಷಿಸಬಹುದಾಗಿದೆ.