ಚಡಚಣ: ಚಿನ್ನದ ಬ್ಯಾಗ್ ಇರುವುದು ಯುವಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಹುಲಜಂತಿಯಲ್ಲಿ ನಾಗೇಶ್ ಹೇಳಿಕೆ
ದಸರಾ ಹಬ್ಬದ ಪ್ರಯುಕ್ತವಾಗಿ ಮನೆಯನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ, ಮನೆಯ ಮೇಲೆ ಬಟ್ಟೆಗಳನ್ನು ಹಾಕುವ ವೇಳೆ ನಮ್ಮ ಮನೆಯ ಯುವಕರು ಹಳೆಯ ಮನೆಯ ಮೇಲೆ ಚಿನ್ನದ ಬ್ಯಾಗ್ ಇರುವುದನ್ನು ಗಮನಿಸಿ ಮಾಹಿತಿ ನೀಡಿದರು. ತಕ್ಷಣ ನಾವು ಪೊಲೀಸರಿಗೆ ಮಾಹಿತಿ ನೀಡಿದಾಗ ಚಡಚಣ ಬ್ಯಾಂಕ್ ದರೋಡೆ ಮಾಡಿದ ಕಳ್ಳ ಈ ಬ್ಯಾಗನ್ನು ತಂದು ಇಟ್ಟಿದ್ದು ಗೊತ್ತಾಗಿದೆ ಇನ್ನು ಈ ರೀತಿಯ ಘಟನೆಯಾಗಿದ್ದು. ನಮಗೆ ಭಯವಾಗುತ್ತಿದೆ ಎಂದು ಹುಲಿಜಂತಿ ಗ್ರಾಮದ ಮುಖಂಡ ನಾಗೇಶ್ ಶುಕ್ರವಾರ ಸಾಯಂಕಾಲ 4ಗಂಟೆ ಸುಮಾರಿಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದರು.