ಕಲಬುರಗಿ : ಇತ್ತೀಚಿಗೆ ದೇಶದಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಾಗಿದೆ.. ಹೌದು.. ಕಲಬುರಗಿ ನಗರದ ಶಿವಶರಣಪ್ಪ ಬಿರಾದರ್ ಎಂಬುವರ ವಾಟ್ಸಪ್ಗೆ ಮುಂಬಯಿ ಮೂಲದ ಪ್ರದೀಪ್ ಎಂಬಾತ ನಾನು ಮುಂಬಯಿ ಕ್ರೈಂ ಬ್ರ್ಯಾಂಚ್ನಿಂದ ಕರೆ ಮಾಡ್ತಿದ್ದು, ನಿಮ್ಮ ಅಕೌಂಟ್ಗೆ 2 ಕೋಟಿ ಟ್ರಾನ್ಸಫರ್ ಆಗಿದೆ.. ನಿಮ್ಮ ಕೆಸ್ ಆಗಿದೆ ಅಂತಾ ಬೆದರಿಸಿದ್ದಾರೆ.. ಡಿ15 ರಂದು ರಾತ್ರಿ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ನೀವು ನಾವು ಕೊಡೊ ಅಕೌಂಟ್ಗೆ ಆ ಹಣ ವರ್ಗಾವಣೆ ಮಾಡಿ ಇಲ್ಲವಾದಲ್ಲಿ ನಿಮ್ಮನ್ನ ಬಂಧಿಸುತ್ತವೆಂದು ಧಮ್ಕಿ ಹಾಕಿದ್ದಾರೆ. ಅವರ ಮಾತಿಗೆ ಹೆದರಿ ಶಿವಶರಣಪ್ಪ 1 ಕೋಟಿ 26 ಲಕ್ಷ 74 ಸಾವಿರ ಹಣ ಹಾಕಿದ್ದಾರೆ.. ಸದ್ಯ ತಾನು ಮೋಸ ಹೋಗಿದ್ದರ ಬಗ್ಗೆ ಗೋತ್ತಾಗುತ್ತಿದ್ದಂತೆ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ