ಮಂಗಳೂರು: ಮೋದಿ ರೋಡ್ ಶೋ ಜೇನುಗೂಡು ತೆರವಿಗೆ ಆದೇಶ : ನಗರದಲ್ಲಿ ಪರಿಸರವಾದಿಗಳಿಂದ ಆಕ್ಷೇಪ
ಪ್ರಧಾನಿ ಮೋದಿಯವರ ರೋಡ್ ಶೋ ಸಾಗುವ ದಾರಿಯಲ್ಲಿರುವ ಜೇನುಗೂಡುಗಳನ್ನು ತೆರವುಗೊಳಿಸಲು ಅರಣ್ಯಧಿಕಾರಿಗಳಿಗೆ ಮಂಗಳೂರು ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ. ಇದಕ್ಕೆ ಪರಿಸರವಾದಿ ಬೆನಿಡಿಕ್ಟ್ ಫೆರ್ನಾಂಡೀಸ್ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಪ್ರಧಾನಿ ಮೋದಿಯವರ ಭದ್ರತೆ ದೃಷ್ಟಿಯಿಂದ ಇದನ್ನು ಮಾಡಲಾಗುತ್ತಿದೆ ಎಂದರೂ ಜೇನುಗೂಡಗಳನ್ನು ತೆರವುಗೊಳಿಸಿ ಜೇನುನೋಣಗಳನ್ನು ನಾಶಗೊಳಿಸುವುದು ತಪ್ಪು ಎಂದು ಆಗ್ರಹಿಸಿದರು.