ಸರಕಾರದ ಮುಖ್ಯಮಂತ್ರಿ ಕುರ್ಚಿ ಜಗಳದಿಂದಾಗಿ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ, ಯಾವ ಶಾಸಕರು ಕ್ಷೇತ್ರಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸರ್ವೋದಯ ಪಕ್ಷದ ಮುಖಂಡರಾದ ಚಾಮರಸ ಮಾಲೀಪಾಟೀಲ್ ಅವರು ಆರೋಪಿಸಿದರು. ಇಂದು ಸುದ್ದಿದರೊಂದಿಗೆ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದ ಅಧಿಕಾರ ಗುದ್ದಾಟ ರಾಜ್ಯದ ಜನರಿಗೆ ಬಾರಿ ಸಂಕಷ್ಟವಾಗಿ ಮಾರ್ಪಟ್ಟಿದೆ. ಯಾವ ಶಾಸಕರು ಕ್ಷೇತ್ರಗಳಲ್ಲಿಲ್ಲದೇ ಸಮಸ್ಯೆಗಳು ಕೇಳುವವರಿಲ್ಲದಂತಾಗಿದೆ ಎಂದರು.