ಹಾಸನ: ಹಾಸನಂಬ ಉತ್ಸವದಲ್ಲಿ ಸ್ಥಳೀಯ ನಿವಾಸಿಗಳ ಕಡೆಗಡನೆ ಆರೋಪ: ನಗರದ ದೇವಾಲಯದ ಆವರಣದಲ್ಲಿ ಆಮ್ ಆದ್ಮಿ ಪ್ರತಿಭಟನೆ
Hassan, Hassan | Oct 8, 2025 ಹಾಸನಂಬ ಉತ್ಸವದ ವೇಳೆ ಸುತ್ತಮುತ್ತಲ ನಿವಾಸಿಗಳನ್ನು ಕಡೆಗಣಿಸಿ ಅವರಿಗೆ ಕಿರುಕುಳ ನೀಡಲಾಗುತ್ತದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ವತಿಯಿಂದ ರಾಜ್ಯ ಉಪಾಧ್ಯಕ್ಷ ಅಗಿಲೆ ಯೋಗೇಶ್ ನೇತೃತ್ವದಲ್ಲಿ ದೇವಾಲಯದ ಆಭರಣದಲ್ಲಿ ಇಂದು ಪ್ರತಿಭಟನೆ ನಡೆಸಿದರೂ.ಈ ವೇಳೆ ಅಗಿಲ ಯೋಗೀಶ್ ಮಾತನಾಡಿ ಹಾಸನಾಂಬ ಉತ್ಸವ ಇದು ಹಾಸನದ ಜನರ ಸಂಭ್ರಮ ಹಾಗೂ ಜಾತ್ರೆ ಆದರೆ ಜಿಲ್ಲಾಡಳಿತದ ಅಧಿಕಾರಿಗಳು ಇದನ್ನು ಆದಾಯದ ಮೂಲ ಮಾಡಿಕೊಂಡು ಸ್ಥಳೀಯ ನಿವಾಸಿಗಳಿಗೆ ಕಿರುಕುಳ ಕೊಡುವ ಮೂಲಕ ಉತ್ಸವ ನಡೆಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಮನೆಯಿಂದ ಹೊರಬರದಂತೆ ಯಾರಿಕೇಡ್ ಗಳ ಮೂಲಕ ಅವರನ್ನು ದಿಗ್ಬಂದನಕ್ಕೆ ಒಳಪಡಿಸಲಾಗಿದೆ ಮೂಲಭೂತ ಸೌಕರ್ಯಕ್ಕೂ ಅವರು ಪರದಾಡುವಂಥಾಗಿದೆ ಎಂದರು