ಇಳಕಲ್: ನಗರಕ್ಕೆ ಆಗಮಿಸಿದ್ದ ಕಿತ್ತೂರು ಉತ್ಸವ ಜ್ಯೋತಿಯನ್ನು ಸ್ವಾಗತಿಸಿದ ತಾಲೂಕಾಡಳಿತ
Ilkal, Bagalkot | Oct 15, 2025 ಕಿತ್ತೂರು ಉತ್ಸವ ಜ್ಯೋತಿಯ ರಥವನ್ನು ತಹಸೀಲ್ದಾರ ಅಮರೇಶ ಪಮ್ಮಾರ ಮಾಲಾರ್ಪಣೆ ಮಾಡುವ ಮೂಲಕ ಅ.೧೫ ಬುಧವಾರ ಮಧ್ಯಾಹ್ನ ೧ ಗಂಟೆಗೆ ನಗರಕ್ಕೆ ಸ್ವಾಗತಿಸಿಕೊಂಡರು. ನಗರದ ಬಸವೇಶ್ವರ ಸರ್ಕಲ್ಗೆ ಆಗಮಿಸಿದ ಉತ್ಸವ ಜ್ಯೊತಿ ರಥಕ್ಕೆ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್ ಕಿತ್ತೂರು ರಾಣಿ ಚೆನ್ನಮ್ಮಳ ಪುತ್ಥಳಿಗೆ ಪೂಜೆಯನ್ನು ಸಲ್ಲಿಸಿ ಮಾರ್ಲಾಪಣೆಯನ್ನು ಮಾಡಿದರು. ಈ ಸಮಯದಲ್ಲಿ ನಗರಸಭೆ ಸದಸ್ಯರಾದ ಅಮೃತ ಬಿಜ್ಜಳ, ಸುರೇಶ ಜಂಗ್ಲಿ, ಮೌಲೇಶ ಬಂಡಿವಡ್ಡರ, ರೇಷ್ಮಾ ಮಾರನಬಸರಿ,ಬಾಗವಾನ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಪರಶುರಾಮ ಪಮ್ಮಾರ, ವೀರನಗೌಡ ಪಾಟೀಲ, ಪಿಎಸ್ಐ ಮಂಜುನಾಥ ಪಾಟೀಲ, ಪತ್ರಕರ್ತರ ಸಂಘದ ಅಧ್ಯಕ್ಷ ವಿನೋದ ಬಾರಿಗಿಡದ ಮತ್ತು ನಗರಸಭೆಯ ಸಿಬ್ಬಂದಿ ವರ್ಗದವರು ಇದ್ದರು. ನಂತರ ರಥಯಾತ್ರೆ ಹುನಗುಂದ ಪಟ್ಟಣದತ್ತ