ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಶನಿವಾರ ಸಿತಾರರತ್ನ ರಹಮತ್ ಖಾನ್ ಅವರ 71ನೇ ಪುಣ್ಯತಿಥಿ ಅಂಗವಾಗಿ ಸಿತಾರರತ್ನ ಸಮಿತಿ ಧಾರವಾಡ ವತಿಯಿಂದ ಸಂಗೀತೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಚೆನ್ನೈನ ಸಂಗೀತ ಮಾಂತ್ರಿಕ ರುದ್ರೇಶ ಭಜಂತ್ರಿ ಅವರು ಶಹನಾಯಿ ವಾದನವನ್ನು ಪ್ರಸ್ತುತಪಡಿಸಿದರು. ಅನೇಕ ಗಣ್ಯರು ಈ ಸಂಗೀತೋತ್ಸವದಲ್ಲಿ ಭಾಗವಹಿಸಿದ್ದರು.