ರಾಯಚೂರು: ಮುಖ್ಯಮಂತ್ರಿ ಹಾಗೂ ಸಚಿವರ ವೈಮಾನಿಕ ಸಮೀಕ್ಷೆ ಕುರಿತು ನಗರದಲ್ಲಿ ವಿಪ ಸದಸ್ಯ ಚಲವಾದಿ ನಾರಾಯಣಸ್ವಾಮಿ ವ್ಯಂಗ್ಯ
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಳೆ ಹಾನಿಯಿಂದ ರೈತರ ಬೆಳೆ ಹಾನಿ ಕುರಿತು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಸಚಿವರು ಭಾಗವಹಿಸಿ ವೈಮನಿಕ ಸಮೀಕ್ಷೆ ಮೂಲಕ ಬೆಳೆ ಹಾನಿ ಹಾಗೂ ನೆರೆ ಹಾವಳಿಯ ಕುರಿತು ವೀಕ್ಷಣೆ ಮಾಡಿರುವುದರ ಕುರಿತು ರಾಯಚೂರು ನಗರದಲ್ಲಿ ಬುಧವಾರ ಮಧ್ಯಾನ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ವ್ಯಂಗ್ಯ ಭರಿತವಾಗಿ ಮಾತನಾಡಿದ್ದಾರೆ. ಆಕಾಶದಲ್ಲಿ ಹಾರಾಡಿದರೆ ಸಾಲುವದಿಲ್ಲ ಜನರ ಬಳಿಗೆ ಬಂದು ಅವರ ಕಷ್ಟಗಳನ್ನು ಕೇಳಿ ಅವರಿಗೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.