ಶಿವಮೊಗ್ಗ: ರೈತರ ಬಗ್ಗೆ ಧ್ವನಿಯೆತ್ತಿ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು: ನಗರದಲ್ಲಿ ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಶ್ರೀನಿವಾಸ್
ಮಲೆನಾಡಿನ ರೈತರ ಸಮಸ್ಯೆಗಳನ್ನು ಜು.15ರಿಂದ ನಡೆಯಲಿರುವ ಅಧಿವೇಶನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗೆಳೆರಡು ಧ್ವನಿಯೆತ್ತಿ ಸಮಸ್ಯೆಗಳನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ತಿ.ನ.ಶ್ರೀನಿವಾಸ್ ಹೇಳಿದರು.ಶಿವಮೊಗ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಮಾತನಾಡಿದ ಅವರು, ರಾಜಕಾರಣಿಗಳು ಕೆಲವು ವಿಷಯಗಳಲ್ಲಿ ಒಗ್ಗಟ್ಟಾಗುತ್ತಾರೆ. ಆದರೆ ರೈತರ ವಿಷಯ ಬಂದಾಗ ಮಾತ್ರ ಒಗ್ಗಟ್ಟಾಗುವುದಿಲ್ಲ, ಶಿಕಾರಿಪುರದ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ನಡುವೆ ಒಪ್ಪಂದವಾಗಿ ಒಗ್ಗಟ್ಟಾದರು. ಆದರೆ ಶರಾವತಿ ಸಂತ್ರಸ್ಥರ ವಿಷಯ ಬಂದಾಗ ಮಾತ್ರ ಇವರು ದೂರವಾಗುತ್ತಾರೆ.