ಕಾರವಾರ: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದ್ ಬಿದ್ದ ಬಸ್ ಪರದಾಡಿದ ಜನ
ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರಿನ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಸಾರಿಗೆ ಇಲಾಖೆಯ ಬಸ್ ತಾಂತ್ರಿಕ ದೋಷದಿಂದಾಗಿ ಬಂದ್ ಆದ ಕಾರಣದಿಂದಾಗಿ ಪ್ರಯಾಣಿಕರು ಹಾಗೂ ರಸ್ತೆ ಸಂಚಾರಿಗಳು ತೀವ್ರ ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಯಿತು. ಬುಧವಾರ ಸಂಜೆ 6 ಘಟನೆ ಸಂಭವಿಸಿದ್ದು, ತಮ್ಮ ವಿವಿಧ ಕೆಲಸ ಕಾರ್ಯಗಳನ್ನು ಮುಗಿಸಿ ವಾಪಸ್ ಆಗುತ್ತಿರುವ ಜನರು ಈ ಸಂದರ್ಭದಲ್ಲಿ ತೊಂದರೆ ಅನುಭವಿಸಿದರು