ಗುಂಡ್ಲುಪೇಟೆ: ಬಂಡೀಪುರದ ರಸ್ತೆಯಲ್ಲಿ ದುತ್ತನೇ ಎದುರಾದ ಹೆಬ್ಬಾವು... ಬಳಿಕ ಏನಾಯ್ತು ನೋಡಿ ವೀಡಿಯೋ
ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ರಸ್ತೆಯಲ್ಲಿ ಹೆಬ್ಬಾವು ಧುತ್ತನೇ ಎದುರಾದ ಘಟನೆ ನಡೆದಿದ್ದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ಲಾಗುತ್ತಿದೆ. ಬರೋಬ್ಬರಿ 10 ಅಡಿಗೂ ಉದ್ದದ ಹೆಬ್ಬಾವು ಕಂಡು ವಾಹನ ಸವಾರರು ಮೂಕವಿಸ್ಮಿತರಾಗಿದ್ದಾರೆ. ಅರಣ್ಯ ಅರಣ್ಯ ಸಿಬ್ಬಂದಿ ಹೆಬ್ಬಾವನ್ನು ಕಂಡು ಅಲರ್ಟ್ ಆಗಿ ವಾಹನಗಳನ್ನ ತಡೆದು ಹೆಬ್ಬಾವು ರಸ್ತೆ ದಾಟಲು ಅನುವು ಮಾಡಿಕೊಟ್ಟಿದ್ದಾರೆ. ಭಾರೀ ಗಾತ್ರದ ಹೆಬ್ಬಾವು ರಸ್ತೆ ದಾಟುವ ವಿಡಿಯೋ ಫುಲ್ ವೈರಲ್ ಆಗಿದ್ದು ವಾಹನ ಸವಾರರ ಮೊಬೈಲ್ ಕ್ಯಾಮರದಲ್ಲಿ ದೃಶ್ಯ ಸೆರೆಯಾಗಿದೆ.