ರಾಯಚೂರು: ಹತ್ತಿ ವಾಹನ ಸಾಗಿಸುತ್ತಿದ್ದಾಗ ಚಾಲಕನಿಗೆ ಹೃದಯಾಘಾತ ಸಾವು
ಹತ್ತಿ ತುಂಬಿಕೊಂಡು ಹೋಗುತ್ತಿದ್ದ ಪಿಕ್ ಅಪ್ ವಾಹನದ ಚಾಲಕನಿಗೆ ಹೃದಾಯಾಘಾತ ಸಂಭವಿಸಿದ ಪರಿಣಾಮ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಗಾರಲದಿನ್ನಿ ಸಮೀಪ ಸಂಭವಿಸಿದೆ. ಚಾಲಕ ನರಸಿಂಹ (33) ಮೃತ ವ್ಯಕ್ತಿ. ಬೆಳಗ್ಗೆ ಹತ್ತಿ ತುಂಬಿಕೊಂಡು ರಾಯಚೂರು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವಾಗ ಎದೆನೋವು ಕಾಣಿಸಿಕೊಂಡಿದ್ದು, ವಾಹನ ನಿಯಂತ್ರಣ ತಪ್ಪಿ ಪಕ್ಕದ ಜಮೀನಿನಲ್ಲಿ ಪಲ್ಟಿಯಾಗಿದೆ. ನರಸಿಂಹನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯಯೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ವಾಹನದಲ್ಲಿ ತುಂಬಿದ್ದ ಹತ್ತಿಯಲ್ಲ ಹೊಲದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದೆ.