ದಾವಣಗೆರೆ: ನಗರದಲ್ಲಿ ನಿರುದ್ಯೋಗಿ ದಿನ ಆಚರಣೆ ಮೂಲಕ ಪ್ರಧಾನಿ ಮೋದಿ ಜನ್ಮದಿನಾಚರಣೆ
ದಾವಣಗೆರೆ ನಗರದಲ್ಲಿ ನಿರುದ್ಯೋಗಿ ದಿನ ಆಚರಣೆ ಮಾಡಲು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಆಚರಣೆ ಮಾಡಲಾಯಿತು. ರಾಷ್ಟ್ರೀಯ ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆ ನಗರದ ಪ್ರಧಾನ ಅಂಚೆ ಕಚೇರಿ ಮುಂಭಾಗ ರಾಷ್ಟ್ರೀಯ ನಿರುದ್ಯೋಗಿ ದಿನಾಚರಣೆಯನ್ನು ನೌಕರಿ ಚೋರ್ ಗದ್ದಿ ಛೋಡ್ ಎಂಬ ಘೋಷವಾಕ್ಯದೊಂದಿಗೆ ಆಚರಣೆ ಮಾಡಿ, ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆಯಲಾಯಿತು.