ರಟ್ಟೀಹಳ್ಳಿ: ಪಟ್ಟಣದಲ್ಲಿ ಉಲ್ಬಣಗೊಂಡ ಬೀದಿ ನಾಯಿಗಳ ಹಾವಳಿ, ಭಯದ ಆತಂಕದಲ್ಲಿ ಓಡಾಡುತ್ತಿರುವ ವಾಹನ ಸವಾರರು
ರಟ್ಟಿಹಳ್ಳಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡಲು ಸಂಕಷ್ಟ ಅನುಭವಿಸುವಂತಾಗಿದೆ. ಹತ್ತರಿಂದ ಹದಿನೈದು ನಾಯಿಗಳು ಹಿಂಡು ಹಿಂಡಾಗಿ ರಸ್ತೆಯಲ್ಲಿ ಓಡಾಡುತ್ತಿವೆ. ವಾಹನ ಸವಾರರು ನಾಯಿಗಳು ಬೆನ್ನು ಹತ್ತಿ ಕಚ್ಚುವ ಆತಂಕದಲ್ಲಿ ಇದ್ದಾರೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.