ಬೆಂಗಳೂರು ಉತ್ತರ: ಯೂರಿಯಾ ಗೊಬ್ಬರ ಕಡಿಮೆ ಉಪಯೋಗಕ್ಕೆ ರೈತರಿಗೆ ಹೇಳುತ್ತಿದ್ದೇವೆ: ನಗರದಲ್ಲಿ ಸಚಿವ ಚೆಲುವರಾಯಸ್ವಾಮಿ
ಯೂರಿಯ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಸಂಬಂಧಿಸಿ ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ಇವರಿಗೆ ಎಷ್ಟು ಅಂತಾ ಹೇಳಬೇಕು. ಅದು ಕೊರತೆ ಇದೆ ಅಂತಾ ಹೇಳಿದ್ದೇನೆ. ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಕೂಡ ಇದೆ. ಯೂರಿಯ ಕಡಿಮೆ ಉಪಯೋಗಿಸಬೇಕು. ಇದನ್ನೇ ನಾವು ರೈತರಿಗೆ ಸಹ ಹೇಳಿದ್ದೇವೆ. ಇವರು ಈ ರೀತಿ ಮಾಡದೇ ಇದ್ದಿದ್ದರೆ, ನಾವು ಕೇಂದ್ರ ಸರ್ಕಾರದ ಸೂಚನೆ ಹೇಳುತ್ತಿದ್ವಿ. ಆದ್ರೆ ಇದೀಗ ನಾವು ಮನವರಿಕೆ ಮಾಡಕ್ಕಾಗಲ್ಲ. ನಮ್ಮಗೆ ಯೂರಿಯಾ ಕಡಿಮೆ ಕೊಡ್ತಿದ್ದಾರೆ. ಕೇಂದ್ರದಿಂದ ಸಪ್ಲೇ ಕಡಿಮೆಯಾಗುತ್ತಿದೆ ಎಂದರು.