ಹನೂರು: ಮಹದೇಶ್ವರ ಬೆಟ್ಟದಲ್ಲಿ ಇನ್ನೂ ಜೀವಂತವಾಗಿರುವ
ಬುತ್ತಿ ಪದ್ಧತಿ: ಭಕ್ತರ ನಿಷ್ಠೆಗೆ ಸಾಕ್ಷಿಯಾದ ಪರಂಪರೆ
ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ನೂರಾರು ಕಿಲೋಮೀಟರ್ ದೂರದಿಂದ ಸಾಗರೋಪಾಧಿಯಾಗಿ ಭಕ್ತರು ಆಗಮಿಸುತ್ತಾರೆ. ಈ ವೇಳೆ ತಮಗೆ ತಾವೇ ತಯಾರಿಸಿದ ಊಟವನ್ನು ಬುತ್ತಿಯಲ್ಲಿಟ್ಟು ತರುವ ಪಾರಂಪರಿಕ 'ಬುತ್ತಿ ಪದ್ಧತಿ' ಪ್ರಸ್ತುತ್ತ ಕಾಲಘಟ್ಟದಲ್ಲೂ ಇನ್ನೂ ಕೆಲ ಭಕ್ತರಲ್ಲಿ ಜೀವಂತವಾಗಿರುವುದು ಗಮನ ಸೆಳೆಯುತ್ತಿದೆ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು, ಇಲ್ಲಿ ದಾಸೋಹ ಭವನ ಮತ್ತು ವಿವಿಧ ಹೋಟೆಲ್ ಸೌಲಭ್ಯಗಳಿದ್ದರೂ ಸಹ, ಮನೆಯಿಂದ ತಯಾರಿಸಿದ ಅಡುಗೆಗಳನ್ನು ಬುತ್ತಿಯಲ್ಲಿಟ್ಟು ತಂದು ಸೇವನೆ ಮಾಡುವ ಕ್ರಮವನ್ನು ಮುಂದುವರಿಸುತ್ತಿರುವುದು ವಿಶೇಷವಾಗಿದೆ