ಚಾಮರಾಜನಗರ: ನಗರದಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಹಿನ್ನೆಲೆ ಅಳವಡಿಸಿದ್ದ ಕೇಸರಿ ಬಾವುಟ ತೆರವಿಗೆ ಆಗ್ರಹ- ವಿರೋಧದ ಬಳಿಕ ತೆರವು
ಸಿಜೆಐ ಮೇಲೆ ಶೂ ಎಸೆತ ಯತ್ನ ಖಂಡಿಸಿ ದಲಿತ ಸಂಘಟನೆಗಳು, ಎಸ್ಡಿಪಿಐ ಸೇರಿದಂತೆ ಹಲವು ಸಂಘಸಂಸ್ಥೆಗಳು ಚಾಮರಾಜನಗರ ಬಂದ್ ಗೆ ಕರೆ ಕೊಟ್ಟು ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ಆರ್ ಎಸ್ ಎಸ್ ಪಥ ಸಂಚಲನ ಹಿನ್ನೆಲೆ ಅಳವಡಿಸಿದ್ದ ಕೇಸರಿ ಬಾವುಟ ತೆರವು ಮಾಡಬೇಕೆಂದು ಆಕ್ರೋಶ ಹೊರಹಾಕಿದ ಘಟನೆ ಭುವನೇಶ್ವರಿ ವೃತ್ತದಲ್ಲಿ ಶನಿವಾರ ನಡೆಯಿತು. ದಲಿತ ಮುಖಂಡ ಅಯ್ಯನಪುರ ಶಿವಕುಮಾರ್ ಮಾತನಾಡಿ, ಬೆಳಗ್ಗೆ 6 ರಿಂದ ಸಂಜೆ 6 ರ ತನಕ ನಾವು ಬಂದ್ ಆಚರಿಸುತ್ತಿದ್ದೇವೆ. ಈ ವೇಳೆ, ನೀವು ಆರ್ ಎಸ್ ಎಸ್ ಪಥ ಸಂಚಲನಕ್ಕಾಗಿ ಕೇಸರಿ ಬಾವುಟಗಳನ್ನು ಹೇಗೆ ಹಾಕಿಸಿದಿರಿ ಎಂದು ಪೊಲೀಸರು, ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಆರ್ ಎಸ್ ಎಸ್ ಏಜೆಂಟ್ ಗಳಾದ ಪೊಲೀಸರು ಎಂದು ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿದರು.