ತೀರ್ಥಹಳ್ಳಿ: ಆಗುಂಬೆಯ ಐಬಿ ಬಳಿ ಒಂಟಿ ಸಲಗ ಪ್ರತ್ಯಕ್ಷ: ವಿಡಿಯೋ ವೈರಲ್
ಮಲೆನಾಡು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾದಂತೆ ಕಾಣುತ್ತಿದೆ. ಅದರಲ್ಲೂ ಆಗುಂಬೆಯಲ್ಲಿ ಒಂಟಿ ಸಲಗ ಒಂದು ಎಲ್ಲಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಥಳೀಯರಲ್ಲಿ ಭೀತಿಯನ್ನು ಸೃಷ್ಟಿಸುತ್ತಿದೆ. ಆಗುಂಬೆಯ ಐಬಿ ಬಳಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ಭಾನುವಾರ ಅದರ ವಿಡಿಯೋ ವೈರಲ್ ಆಗಿದೆ ಒಂಟಿ ಸಲಗ ಐಬಿ ಸಿಬ್ಬಂದಿಯ ಮೇಲೆ ದಾಳಿಗೂ ಸಹ ಯತ್ನಿಸಿದೆ ಇದರಿಂದಾಗಿ ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.