ಇಳಕಲ್: ದೇವಲ ಪಟ್ಟಣ ಪತ್ತಿನ ಸಂಘ ಸದಸ್ಯರ ಬಲದಿಂದ ಲಾಭದಲ್ಲಿ :ನಗರದಲ್ಲಿ ಅಧ್ಯಕ್ಷೆ ಅನಸೂಯಾ ಸಪ್ಪಂಡಿ
Ilkal, Bagalkot | Sep 15, 2025 ಸಂಘದ ಜೊತೆಗೆ ಸದಾಕಾಲವೂ ಸಹಕರಿಸುತ್ತ ಬಂದಿರುವ ಸದಸ್ಯರ ಬಲದಿಂದ ಸಂಘ ಲಾಭದಲ್ಲಿ ಸಾಗಿದೆ ಎಂದು ದೇವಲ ಪಟ್ಟಣ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಅನಸೂಯಾ ಸಪ್ಪಂಡಿ ಹೇಳಿದರು. ಬಾಗಲಕೋಟ ಜಿಲ್ಲೆಯ ಇಳಕಲ್‌ದ ಸಂಘದ ಕಚೇರಿಯಲ್ಲಿ ಸೆ.೧೫ ಮಧ್ಯಾಹ್ನ ೨ ಗಂಟೆಗೆ ನಡೆದ ೧೯ ನೇ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಂಘ ಕಳೆದ ಸಾಲಿನಲ್ಲಿ ೪೭.೯೭ ಲಕ್ಷ ರೂ ಲಾಭ ಗಳಿಸಿದೆ ಇದಕ್ಕೆಲ್ಲಾ ಶೇರುದಾರರ ಸಹಕಾರವೇ ಕಾರಣ ಎಂದು ಹೇಳಿದರು. ಸಂಘದ ಕಾರ್ಯದರ್ಶಿ ಲಕ್ಷ್ಮಣ ಬಿದರಿ ಮಾತನಾಡಿ ಸಂಘದ ಸದಸ್ಯರ ಸಂಖ್ಯೆ ೩೦೫೪ ಇದ್ದು ಶೇರು ಬಂಡವಾಳ ೫೨.೮೪ ಲಕ್ಷ ರೂ,ನಿಧಿಗಳು ೨.೬೧ ಲಕ್ಷ ರೂ, ಠೇವುಗಳು ೯.೧೩ ಲಕ್ಷ ರೂ, ಸಾಲಗಳು ೬.೬೫ ಲಕ್ಷ ರೂ ದುಡಿಯುವ ಬಂಡವಾಳ ೧೨.೨೭ ಲಕ್ಷ ರೂ ಇದೆ ಎಂದು ವಿವರಿಸಿದ