ವಿಜಯಪುರ: ಸಂತ್ರಸ್ತರ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡಬಾರದು ನಗರದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಲೋಣಿ ಹೇಳಿಕೆ
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಮ್ಮ ಸರ್ಕಾರ ವಸತಿ ನೀಡಲು ಸಿದ್ಧವಾಗಿದೆ ಆದರೆ ವಿನಾಕಾರಣ ವಿರುದ್ಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡಿ ನಮ್ಮ ಪಕ್ಷದ ಶಾಸಕ ಅಶೋಕ ಮನಗೂಳಿ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ, 25 ವರ್ಷಗಳ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ 84 ಕುಟುಂಬಗಳಿಗೆ ನಾವು ಪುರಸಭೆ ವತಿಯಿಂದ ನಿವೇಶನಗಳನ್ನು ನೀಡಿದ್ದೇವೆ, ಈ ವಿಷಯವನ್ನು ಮಾಜಿ ಶಾಸಕ ರಮೇಶ ಭೂಸನೂರು ಅರ್ಥಮಾಡಿಕೊಳ್ಳಬೇಕು. ವಿನಾಕಾರಣ ಯಾವುದೇ ಮಾಹಿತಿ ಇಲ್ಲದೆ ಇಲ್ಲಸಲು ಆರೋಪ ಬಿಡಬೇಕು ಎಂದು ವಿಜಯಪುರದಲ್ಲಿ ಸೋಮವಾರ ಸಾಯಂಕಾಲ 5ಗಂಟೆ ಸುಮಾರಿಗೆ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಲೋಣಿ ಹೇಳಿದರು.