ಹಾಸನ: ಹಾಸನಾಂಬ ಉತ್ಸವಕ್ಕೆ ಕ್ಷಣಗಣನೆ : ಗುರುವಾರ ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ಗರ್ಭಗುಡಿ ಬಾಗಿಲು ಓಪನ್#localissue
Hassan, Hassan | Oct 8, 2025 ಹಾಸನ: ಹಾಸನಾಂಬ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ನಾಳೆ ಮಧ್ಯಾಹ್ನ 12 ಗಂಟೆ ಸರಿಯಾಗಿ ಹಾಸನನಾಂಬ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಿದ್ದು ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಶ್ರೀ ಹಾಸನಂಬೆ ದೇವಿ ಈ ಬಾರಿ 13 ದಿನಗಳ ಕಾಲ ಸಾರ್ವಜನಿಕ ದರ್ಶನವನ್ನು ನೀಡಲಿದ್ದಾರೆ.ಉತ್ಸವದ ಅಂಗವಾಗಿ ಈಗಾಗಲೇ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು ನಗರದಾದ್ಯಂತ ಬಣಗುಡುವ ದೀಪಾಲಂಕಾರ ಹಾಗೂ ದರ್ಶನಕ್ಕೆ ಸರದಿಶಾಲಿನಲ್ಲಿ ನಿಲ್ಲಲು ದೇವಾಲಯದ ಸುತ್ತ ಬ್ಯಾರಿಕೆಡ್ ಗಳನ್ನು ಅಳವಡಿಸಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಅಲ್ಲದೆ ಈ ಬಾರಿ ವಿವಿಐಪಿ ದರ್ಶನ ವ್ಯವಸ್ಥೆಗೆ ತಕ್ಕಮಟ್ಟಿಗಿನ ಕಡಿವಾಣ ಹಾಕಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ .