ಬೆಂಗಳೂರು ಉತ್ತರ: ಎತ್ತು ಏರಿದ ವಾಟಾಳ್! ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ಯಾಕೆ? ಮೆಜೆಸ್ಟಿಕ್ ಅಲ್ಲಿ ಒಂಟಿ ಎತ್ತು ಸದ್ದು
ಅಕ್ಟೋಬರ್ 18 ಸಂಜೆ ನಾಲ್ಕು ಗಂಟೆಯ ಸುಮಾರಿಗೆ ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ. ಒಂಟಿ ಎತ್ತನ್ನ ಏರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ಕೂಡ ಗುಂಡಿ ಕಾಣಿಸ್ತಾಯಿದೆ ಆದಷ್ಟು ಬೇಗ ರಸ್ತೆ ದುರಸ್ತಿ ಮಾಡಿ ಅಂತ ಆಗ್ರಹಿಸಿದ್ದಾರೆ. ಅದಷ್ಟು ಬೇಗನೆ ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದಾರೆ.