ಮಂಡ್ಯ: ಜಿಲ್ಲೆಯಲ್ಲಿ 101 ನೂತನ ಮತಗಟ್ಟೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಕೆ: ನಗರದಲ್ಲಿ ಡಿ. ಸಿ ಡಾ.ಕುಮಾರ
Mandya, Mandya | Oct 11, 2025 ಜಿಲ್ಲೆಯಲ್ಲಿ ನೂತನವಾಗಿ 101 ಮತಗಟ್ಟೆ ಸ್ಥಾಪನೆಗೆ ಚುನಾವಣೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ಹೇಳಿದರು. ಅಕ್ಟೋಬರ್ 10 ರಂದು (ನಿನ್ನೆ) ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತಗಟ್ಟೆಗಳ ಪುನರ್ ವಿಂಗಡನೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 1200 ಕ್ಕಿಂತ ಹೆಚ್ಚು ಜನರಿರುವ ಮತಗಟ್ಟೆಗಳು ಹಾಗೂ ಮತದಾರರ ವಾಸಸ್ಥಳದಿಂದ 2 ಕಿ.ಮೀ ಗಿಂತಲೂ ಹೆಚ್ಚು ಅಂತರವಿರುವು ಮತಗಟ್ಟೆಗಳನ್ನು ಪುನರ್ ವಿಂಗಡನೆ ಮಾಡಲು ಬೇಡಿ,1200 ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತಿತು ಈ ನಿಟ್ಟಿನಲ್ಲಿ ಈಗ 101 ಮತಗಟ್ಟೆ ಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.