ದಾಂಡೇಲಿ: ಸೆ.22ರಿಂದ ಸೆ.30 ರವರೆಗೆ ಶಿವ ಪ್ರತಿಷ್ಠಾನ ಹಿಂದುಸ್ತಾನ ಸಮಿತಿಯಿಂದ ನಗರದಲ್ಲಿ ಶ್ರೀ.ದುರ್ಗಾಮಾತಾ ದೌಡ್, ಶಿವ ಪ್ರತಿಷ್ಠಾನ ಸಮಿತಿ ಮಾಹಿತಿ
ದಾಂಡೇಲಿ : ನಗರದ ಶ್ರೀ. ಶಿವ ಪ್ರತಿಷ್ಠಾನ ಹಿಂದುಸ್ಥಾನ ಸಮಿತಿ ಇದರ ಆಶ್ರಯದಡಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ದುರ್ಗಾಮಾತಾ ದೌಡ್ ಕಾರ್ಯಕ್ರಮವು ಸೆ.22 ರಿಂದ ಆರಂಭಗೊಂಡು ಸೆ.30 ರವರೆಗೆ ಪ್ರತಿದಿನ ಬೆಳಿಗ್ಗೆ 5:00 ಗಂಟೆಗೆ ಆರಂಭಗೊಂಡು ಬೆಳಿಗ್ಗೆ 7:30 ಗಂಟೆಯವರೆಗೆ ನಡೆಯಲಿದೆ ಎಂದು ಶ್ರೀ ಶಿವ ಪ್ರತಿಷ್ಠಾನ ಹಿಂದುಸ್ತಾನ ಸಮಿತಿಯ ಪ್ರಮುಖರಾದ ಶ್ರೀನಾಥ ಮಿರಾಶಿ ಮತ್ತು ಕೃಷ್ಣ ಬೊಬಾಟೆ ಅವರು ತಿಳಿಸಿದ್ದಾರೆ. ಅವರು ಮಂಗಳವಾರ ಸಂಜೆ 6:30 ಗಂಟೆ ಸುಮಾರಿಗೆ ನಗರದಲ್ಲಿ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿದರು ಸೆ. 22 ರಂದು ಸೋಮಾನಿ ವೃತ್ತದ ಹತ್ತಿರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯ ಆವರಣದಿಂದ ಶ್ರೀ ದುರ್ಗಾ ಮಾತಾದೌಡ್ ಆರಂಭವಾಗಲಿದೆ ಎಂದು ತಿಳಿಸಿದರು.