ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಮರಗಳ ಹನನ, ಪರಿಸರ ಪ್ರೇಮಿಗಳ ಆಕ್ರೋಶ
ಶ್ರೀರಂಗಪಟ್ಟಣದಲ್ಲಿ ಮರಗಳ ಹನನ, ಪರಿಸರ ಪ್ರೇಮಿಗಳ ಆಕ್ರೋಶ ಶ್ರೀರಂಗಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆ, ತೋಟಗಾರಿಕೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಆವರಣಗಳಲ್ಲಿ ನೂರಾರು ಮರಗಳನ್ನು ಕಡಿದು ಹಾಕಲಾಗಿದ್ದು ಇದರಿಂದಾಗಿ ನೆರಳು ಮಾಯವಾಗಿದೆ. ಈ ಮರಗಳ ಹನನಕ್ಕೆ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಡಿದ ಮರಗಳ ಬದಲಿಗೆ ಹೊಸ ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸುವಂತೆ ಆಗ್ರಹಿಸಿದ ಅವರು ಮಾನವನ ದುರಾಸೆಯಿಂದಾಗಿ ಕಾಡು ಅಳಿವಿನ ಹಂಚು ತಲುಪಿ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡುತ್ತಿರುವುದು ಆತಂಕಕ್ಕಾರಿ ವಿಚಾರವಾಗಿದ್ದು ಕಾಡು ಕಣ್ಮರೆಯಾದಂತೆ ಪ್ರಕೃತಿ ವಿಕೋಪದಂತಹ ಘಟನೆಗಳು ಮರುಕಳುಸಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸುತ್ತಿರುವ ಉದಾಹರಣೆಗಳಿದ್ದು ಇದನ್ನರಿತು ಪರಿಸರವನ