ಮಳವಳ್ಳಿ: ಕೊದೇನಕೊಪ್ಪಲು ಗ್ರಾಮದಲ್ಲಿ ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿ, 4 ಮಂದಿ ಬಂಧನ
ಮಳವಳ್ಳಿ ತಾಲೂಕಿನ ಕೊದೇನಕೊಪ್ಪಲು ಗ್ರಾಮದಲ್ಲಿ ಪೊಲೀಸರು ಜೂಜು ಅಡ್ಡೆಯ ಮೇಲೆ ದಾಳಿನಡೆಸಿ 4 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಜರುಗಿದೆ. ಗ್ರಾಮದ ಸಿದ್ದೇಗೌಡ ಎಂಬುವರ ಮನೆಯ ಮುಂಭಾಗದ ಬೀದಿ ದೀಪದ ಬಳಿ ಅಕ್ರಮವಾಗಿ ಜೂಜಿನಲ್ಲಿ ತೊಡಗಿದ್ದ ನಾಲ್ವರನ್ನು ಕಿರುಗಾವಲು ಪೊಲೀಸರು ಬಂಧಿಸಿ 1850 ರೂ.ವಶಕ್ಕೆ ಪಡೆದುಕೊಂಡಿದ್ದಾರೆ. ಜೂಜು ಆಡುವುದು ಕಾನೂನು ಬಾಹೀರವಾಗಿದೆ. ಹಾಗಾಗಿ ಯಾವುದೇ ಗ್ರಾಮದಲ್ಲಿ ಮಾಹಿತಿ ಸಿಕ್ಕರೂ ದಾಳಿ ನಡೆಸಿ ಎಚ್ಚರಿಕೆ ವಹಿಸುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ