ಮಳವಳ್ಳಿ: ಪಟ್ಟಣದಲ್ಲಿ ಕುರುಬ ಸಮಾಜದ ಮುಖಂಡರ ಸಭೆ, ಸಮೀಕ್ಷೆಯ ಕಲಾಂನಲ್ಲಿ ಕುರುಬ ಎಂದು ಕಡ್ಡಾಯವಾಗಿ ಬರೆಯಿಸುವಂತೆ ಮನವಿ
ಮಳವಳ್ಳಿ ; ಸೆಪ್ಟೆಂಬರ್ 22 ರಿಂದ ನಡೆಯುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ತಾಲೂಕಿನ ಕುರುಬ ಸಮಾಜದ ಬಂಧುಗಳು ಜಾತಿ ಕಾಲಂ ನಲ್ಲಿ ಕಡ್ಡಾಯವಾಗಿ ಕುರುಬ ಎಂದು ಬರೆಯಿಸಬೇ ಕೆಂದು ಕುರುಬ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಾಯಂಕಾಲ 4.30 ರ ಸಮಯ ದಲ್ಲಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಏರ್ಪಡಿಸಿದ್ದ ಜನ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡ್ಯ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಂ ಎಲ್ ಸುರೇಶ್ ಅವರು ಜನಸಂಖ್ಯೆ ಗೆ ಅನುಗುಣವಾಗಿ ಸರ್ಕಾರದ ಶಿಕ್ಷಣ, ಆರ್ಥಿಕ, ಔದ್ಯೋಗಿಕ ಕ್ಷೇತ್ರ ಗಳಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಈ ಸಮೀಕ್ಷೆ ತುಂಬಾ ಮಹತ್ವದ್ದಾಗಿದೆ ಎಂದರು