ಬೀಳಗಿ: ಬಾಡಗಂಡಿ ,ರೊಳ್ಳಿ ಗ್ರಾಮಗಳಲ್ಲಿ ಕುಸಿದ ಮನೆ, ಬೆಳೆ ಹಾನಿ ವೀಕ್ಷಿಸಿದ ಶಾಸಕ ಜೆ.ಟಿ.ಪಾಟೀಲ
Bilgi, Bagalkot | Sep 30, 2025 ಅತೀಯಾದ ಮಳೆಯಿಂದಾಗ ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಬಾಡಗಂಡಿ ಮತ್ತು ರೊಳ್ಳಿ ಗ್ರಾಮಗಳಲ್ಲಿ ಹಾನಿಗೊಳಗಾದ ವಿವಿಧ ಬೆಳೆ ಹಾಗೂ ಕುಸಿದ ಮಣ್ಣಿನ ಮನೆಗಳನ್ನು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ್ ವೀಕ್ಷಣೆ ಮಾಡಿದರು. ಬಾಡಗಂಡಿ ಮತ್ತು ರೊಳ್ಳಿ ಗ್ರಾಮಗಳ ವ್ಯಾಪ್ತಿಯ ಹಾನಿಗೊಳಗಾದ ಈರುಳ್ಳಿ, ಮೆಕ್ಕೆಜೋಳ ಹಾಗೂ ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳನ್ನು ವೀಕ್ಷಣೆ ಮಾಡಿದರು. ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು. ಅತೀಯಾದ ಮಳೆಯಿಂದಾಗಿ ಸರಿಯಾಗಿ ಬೆಳೆ ಬಾರದೆ ರೈತ ಸಂಕಷ್ಟಕ್ಕೆ ಒಳಗಾಗಿದ್ದಾನೆಂದರು.