ಪುತ್ತೂರು: ಪುಲ್ಲಿಕಲ್ ಎಂಬಲ್ಲಿ 55 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ Cr NO 32/1970 u/s 154,155 (2)MF Rules 1969 sec 86 of MF Act ( *LPC :2/1972)* ಪ್ರಕರಣದಲ್ಲಿ LPC ವಾರಂಟ್ ಆಸಾಮಿ ಯಾಗಿರುವ CR.ಚಂದ್ರನ್ ಪ್ರಾಯ 78 ವರ್ಷ ಮಲಪುರಂಜಿಲ್ಲೆ ಕೇರಳ ರಾಜ್ಯ ಎಂಬಾತನು 55ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದವನನ್ನು ಕೇರಳ ರಾಜ್ಯದ ಕ್ಯಾಲಿಕಟ್ ನ ಪುಲ್ಲಿಕಲ್ ಎಂಬಲ್ಲಿ ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳಲ್ಲಿ ಅತ್ಯಂತ ಹಳೆಯ ಪ್ರಕರಣವಾಗಿದೆ.