ಮೊಳಕಾಲ್ಮುರು: ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ವಿರಾಟ್ ವಿಶ್ವಕರ್ಮ ಜಯಂತೋತ್ಸವ
ಮೊಳಕಾಲ್ಮುರು:-ವಿಶ್ವಕರ್ಮರನ್ನು ದೇವರುಗಳ ವಾಸ್ತುಶಿಲ್ಪಿ ಎಂದು ಹಿಂದೆ ಪರಿಗಣಿಸಲಾಗಿ, ಬ್ರಹ್ಮಾಂಡದ ಮೊದಲ ಇಂಜಿನಿಯರ್ ಎಂದು ಪೂಜಿಸಲಾಗುತ್ತಿತ್ತು ಎಂದು ಶಿಕ್ಷಕ ರಾಘವೇಂದ್ರ ಆಚಾರ್ ತಿಳಿಸಿದರು. ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ವಿಶ್ವ ಕರ್ಮ ಸಮಾಜದಿಂದ ಏರ್ಪಡಿಸಿದ್ದ ಶ್ರೀ ವಿರಾಟ್ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಬೇಕು. ಮಕ್ಕಳಿಗೆ ಖಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಸಮುದಾಯದಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಲಾಗುವುದು ಎಂದರು..