ಕಲಬುರಗಿ: ನ2 ರಂದೆ ಚಿತ್ತಾಪುರದಲ್ಲಿ ನಮಗೂ ಪಥಸಂಚಲನಕ್ಕೆ ಅನುಮತಿ ನೀಡಿ: ನಗರದಲ್ಲಿ ಡಿಸಿಗೆ ಮನವಿ ಸಲ್ಲಿಸಿದ ಭೀಮ್ ಆರ್ಮಿ ಸಂಘಟನೆ
ಕಲಬುರಗಿ : ಈಗಾಗಲೇ ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಇಂದು ಆರ್‌ಎಸ್‌ಎಸ್ ಸಂಘಟನೆ ಕಲಬುರಗಿ ಡಿಸಿಗೆ ಮನವಿ ಸಲ್ಲಿಸಿದೆ.. ಇದರ ಮಧ್ಯೆ ಇಂದು ನಮಗೂ ಅದೇ ದಿನದಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅವಕಾಶ ನೀಡುವಂತೆ ಕಲಬುರಗಿ ಡಿಸಿಗೆ ಭೀಮ್ ಆರ್ಮಿ ಸಂಘಟನೆ ಮನವಿ ಸಲ್ಲಿಸಿದೆ.. ಅಕ್ಟೋಬರ್ 21 ರಂದು ಮಧ್ಯಾನ 2 ಗಂಟೆಗೆ ಭೀಮ್ ಆರ್ಮಿ ಸಂಘಟನೆ ರಾಜ್ಯಾಧ್ಯಕ್ಷ ಎಸ್ ಎಸ್ ತಾವಡೇ ನೇತೃತ್ವದಲ್ಲಿ ನವೆಂಬರ್ 2 ರಂದೇ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ನೀಡುವಂತೆ ಮನವಿ ಪತ್ರ ಸಲ್ಲಿಸಿದ್ದು, ಈ ಮೂಲಕ ಆರ್‌ಎಸ್‌ಎಸ್ ಸಂಘಟನೆಗೆ ಟಕ್ಕರ್ ಕೊಡಲು ಭೀಮ್ ಆರ್ಮಿ ಮುಂದಾಗಿದೆ