ಮಾಜಿ ಸಚಿವರು, ಶತಾಯುಷಿ, ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಹೆಸರಿನಲ್ಲಿ, ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಉದ್ದೇಶದಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KWJ) ದತ್ತಿನಿಧಿಗೆ ₹3 ಲಕ್ಷ ರೂಪಾಯಿ ಠೇವಣಿ ಮಾಡಲಾಯಿತು. ಈ ಸಂಬಂಧ ಚೆಕ್ ಅನ್ನು ಇಂದು ಸಂಘದ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಹಸ್ತಾಂತರಿಸಿದೆನು. ಪತ್ರಕರ್ತರು ಸಮಾಜದ ಕನ್ನಡಿ. ಅವರ ಸೇವೆ, ಮತ್ತು ನಿಸ್ವಾರ್ಥ ಪರಿಶ್ರಮಕ್ಕೆ ಗೌರವ ಸೂಚಿಸುವ ಈ ದೇಣಿಗೆ ಭವಿಷ್ಯದಲ್ಲಿ ಪತ್ರಕರ್ತರ ಕಲ್ಯಾಣ ಮತ್ತು ಪ್ರೋತ್ಸಾಹಕ್ಕೆ ನೆರವಾಗಲಿದೆ. ಕಾರ್ಯಕ್ರಮವು ಬೀದರ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯಿತು. ಸಂಘದ ಪದಾಧಿಕಾರಿಗಳು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು.