ಕೃಷ್ಣರಾಜಪೇಟೆ: ಕಂಠಪೂರ್ತಿ ಕುಡಿದು ಬಂದು ಅಂಗನವಾಡಿಯಲ್ಲಿ ಮಲಗಿದ್ದ ವ್ಯಕ್ತಿ ಪೊಲೀಸರ ವಶಕ್ಕೆ, ಕೆ ಆರ್ ಪೇಟೆಯಲ್ಲಿ ನಡೆದ ಘಟನೆ
ಕೆ ಆರ್ ಪೇಟೆ : ಕಂಠಪೂರ್ತಿ ಕುಡಿದು ಬಂದು ಅಂಗನವಾಡಿಯಲ್ಲಿ ಮಲಗಿ ಮಕ್ಕಳು ಪೋಷಕರಲ್ಲಿ ಆತಂಕ ಸೃಷ್ಟಿಸಿದ್ದ ಭೂಪನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೆ ಆರ್ ಪೇಟೆ ಪಟ್ಟಣದಲ್ಲಿ ಜರುಗಿದೆ. ಕೆ ಆರ್ ಪೇಟೆ ಪಟ್ಟಣದ ಹೇಮಾವತಿ ಕ್ವಾರ್ಟ್ಸ್ ಆವರಣದಲ್ಲಿ ಇರುವ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಮಧ್ಯಾಹ್ನ 12.30ರ ಸಮಯದಲ್ಲಿ ಈ ಘಟನೆ ಜರುಗಿದೆ. ಮಕ್ಕಳು ಅಂಗನವಾಡಿಯಲ್ಲಿದ್ದಾಗಲೇ ಕಂಟಪೂರ್ತಿ ಕುಡಿದು ಬಂದು ಮಲಗಿದ ವ್ಯಕ್ತಿಯನ್ನು ಗುಲ್ಬರ್ಗ ಮೂಲದ ನಿಂಗಪ್ಪ ಎಂದು ಗುರುತಿಸಲಾಗಿದೆ. ಈ ವೇಳೆ ಪುಟ್ಟ ಮಕ್ಕಳೊಂದಿಗೆ ಆತ ಅಸಭ್ಯ ವರ್ತನೆ ತೋರಿದ್ದಾನೆ ಎಂದು ಪೋಷಕರು ದೂರಿದ್ದಾರೆ.