ನೆಲಮಂಗಲ, ಡಿಸೆಂಬರ್ 16: ರಾಜ್ಯದಲ್ಲಿ ಯೂರಿಯಾ ಅಭಾವದಿಂದ ರೈತರು ಕಿಲೋಮೀಟರ್ಗಟ್ಟಲೆ ಸಾಲಿನಲ್ಲಿ ನಿಂತರೂ ಗೊಬ್ಬರ ಸಿಗದೆ ಪರದಾಡುತ್ತಿರುವ ನಡುವೆಯೇ, ರೈತರಿಗೆ ವಿತರಿಸಬೇಕಿದ್ದ ಯೂರಿಯಾ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಆತಂಕಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೆಜ್ಜಗದಹಳ್ಳಿ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ 2 ಸಾವಿರ ಕೆಜಿ ಯೂರಿಯಾವನ್ನು DRI ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಗೆಜ್ಜಗದಹಳ್ಳಿಯಲ್ಲಿ ತಜೀರ್ ಖಾನ್ ಯೂಸುಫ್ ಎಂಬವರು ಸುಮಾರು 6 ತಿಂಗಳ ಹಿಂದೆ ತಿಂಗಳಿಗೆ 40 ಸಾವಿರ ರೂಪಾಯಿ ಬಾಡಿಗೆಗೆ ಶೆಡ್ ಪಡೆದಿದ್ದು, ಅಲ್ಲಿಂದ