ಹುಮ್ನಾಬಾದ್: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು : ಬಿಇಒ ವೆಂಕಟೇಶ್ ಗುಡಾಳ್
Homnabad, Bidar | Nov 13, 2025 ವಿದ್ಯಾರ್ಥಿಗಳು ಪಟ್ಟದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು ಎಂದು ಬಿಇಒ ವೆಂಕಟೇಶ್ ಅವರು ಸಲಹೆ ನೀಡಿದರು. ಧುಮ್ಮನಸೂರಿನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಸಿದ್ಧಾರೂಢ ಶಾಲೆಯ ಪರಿಸರದಲ್ಲಿ ಗುರುವಾರ ಮಧ್ಯಾಹ್ನ 12ಕ್ಕೆ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ವೀರಪ್ಪ ಭೂತಾಳೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಕರುಣದೇವಿ, ಮುರುಗೇಂದ್ರ ಸಜ್ಜನಶೆಟ್ಟಿ, ಶಿವರಾಜ ಮೇತ್ರೆ ಇದ್ದರು. ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.