ನಗರದ ಅಕ್ಕಮಹಾದೇವಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ಮದ್ಯಾಹ್ನ 1ಕ್ಕೆ ಮನುಷ್ಯತ್ವವೇ ಮಹಾನವಮಿ ಶಬ್ನಂ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜಯದೇವಿ ತಾಯಿ ಲಿಗಾಡೆ ಅವರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಾವಿದ್ಯಾಲಯದ ಪ್ರಾಚಾರ್ಯ ಡಾಕ್ಟರ್ ರಂಜನಾ ಉದ್ಘಾಟಿಸಿದರು ಡಾಕ್ಟರ್ ಮುಕ್ತಾಂಬಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಗಂಗಾಂಬಿಕೆ ಪಾಟೀಲ್ ವಿಶೇಷ ಉಪನ್ಯಾಸ ಮಂಡಿಸಿದರು. ಮಹಾದೇವಿ ಜ್ಯಾಂತೆ, ವಿಜಯಲಕ್ಷ್ಮಿ ಪಾಟೀಲ, ಸಿ ಬಿ ದೇವರಾಜ್ ಇದ್ದರು.