ಬೀಳಗಿ: ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯ ನೆರವೇರಿಸಿದ ವಿಪತ್ತು ನಿರ್ವಹಣಾ ಘಟಕ
Bilgi, Bagalkot | Oct 29, 2025 ಬಾಗಲಕೋಟೆ ಜಿಲ್ಲೆಯ ಬೀಳಗಿ ವಲಯದ ಅಂಬೇಡ್ಕರ್ ನಗರ ಕಾರ್ಯಕ್ಷೇತ್ರದಲ್ಲಿ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯ ನಡೆರವೇರಿಸಲಾಯಿತು. ಮೊದಲು ಮಾಸಿಕ ಸಭೆ ನಡೆಸಿ, ಸ್ವಯಂ ಸಾಮಾಜಿಕ ಕಾರ್ಯವನ್ನು ಎಲ್ಲ ಘಟಕದ ಸದಸ್ಯರು ನಿರ್ಗತಿಕರ ಮಾಸಾಶನ ಪಡೆದುಕೊಳ್ಳುತ್ತಿರುವ ಫಲಾನುಭವಿಯಾದ ಮಲಪ್ಪ ಮಾಂಕನಿ ಅವರ ಮನೆಯ ಸುತ್ತಲಿನ ಕಸ ಕಂಟಿಗಳನ್ನು ಕಡೆದು ಸ್ವಚ್ಛತೆ ಮಾಡಿದರು.