ತಾಲೂಕಿನ ಮೈಸಲಗಾ ತಾಂಡಾದಲ್ಲಿ ಹಾರಕೂಡದ ಪೂಜ್ಯಶ್ರೀ ಡಾಕ್ಟರ್ ಚನ್ನವೀರ ಶಿವಾಚಾರ್ಯರ ಪಾವನ ಸಾನಿಧ್ಯದಲ್ಲಿ ಶ್ರೀ ಭಾಗ್ಯವಂತಿ ದೇವಿ 21ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವ ನಿಮಿತ್ಯ ಜರುಗಿದ ಧರ್ಮ ಸಭೆಯನ್ನು ಹಾರಕೂಡದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಪೂಜ್ಯ ಶಂಕರ ಆಯಿ, ಶ್ರೀ ಅನಿಲ ಮಹಾರಾಜ, ಶ್ರೀ ಶಾಂತಕುಮಾರ ರಾಠೋಡ, ಶ್ರೀ ಗುಂಡಪ್ಪ ಮಲ್ಕಾಜಿ ಮುಂತಾದವರು ಉಪಸ್ಥಿತರಿದ್ದರು.