ದಾವಣಗೆರೆ: ತ್ಯಾವಣಿಗೆ ಗ್ರಾಮದಲ್ಲಿ ಯುವಕ ಆತ್ಮಹತ್ಯೆ, ನಗರದಲ್ಲಿ ಕುಟುಂಬಸ್ಥರಿಗೆ ಶಾಸಕ ಬಸವಂತಪ್ಪ ಸಾಂತ್ವನ
ಮಾಯಕೊಂಡ ವಿಧಾನಸಭಾ ಕ್ಷೇತ್ರದ ತ್ಯಾವಣಿಗೆ ಗ್ರಾಮದಲ್ಲಿ ಯುವಕ ನೇಣು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ನಗರದ ಎಸ್.ಎಸ್.ಆಸ್ಪತ್ರೆ ಶವಾಗಾರ ಕೊಠಡಿಯಲ್ಲಿ ಮೃತದೇಹವನ್ನು ಇರಿಸಲಾಗಿದ್ದು ಭಾನುವಾರ ಸ್ಥಳಕ್ಕೆ ಶಾಸಕ ಬಸವಂತಪ್ಪ ಭೇಟಿ ನೀಡಿ ಮೃತದೇಹ ವೀಕ್ಷಿಸಿದರು. ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂಬಂಧ ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.