ಹಾಸನ: ಹಾಸನಾಂಬ ಉತ್ಸವದಲ್ಲಿ ಪತ್ರಕರ್ತರ ಕಡೆಗಣನೆ ಆರೋಪ :ಡಿಸಿ ಕಚೇರಿ ಎದುರು ಪತ್ರಕರ್ತರಿಂದ ಮೌನ ಪ್ರತಿಭಟನೆ
Hassan, Hassan | Oct 7, 2025 ಈ ಬಾರಿ ಜಿಲ್ಲಾಡಳಿತವು ಮಾಧ್ಯಮದವರನ್ನು ಅಣಕಿಸಿದಂತ ನಡವಳಿಕೆ ತೋರಿದರೆಂಬ ಆರೋಪ ಕೇಳಿ ಬಂದಿದೆ. ಪತ್ರಿಕಾ ಹಾಗೂ ಟಿವಿ ಮಾಧ್ಯಮದ ಪ್ರತಿನಿಧಿಗಳಿಗೆ ಆಹ್ವಾನ ಪತ್ರಿಕೆ ನೀಡದೆ, ಕೇವಲ ಸೋಶಿಯಲ್ ಮೀಡಿಯಾ ನಿರ್ವಾಹಕರಿಗೆ ಮಾತ್ರ ಆಹ್ವಾನ ನೀಡಿರುವುದು ಪತ್ರಿಕಾ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕ್ರಮವನ್ನು ಖಂಡಿಸಿ ಹಾಸನದ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಿದರು. ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು, “ಹಾಸನಾಂಬೆ ಜಾತ್ರೆ ಹಾಸನದ ಗುರುತು — ಮಾಧ್ಯಮದವರ ಸಹಕಾರದಿಂದಲೇ ದೇವಿಯ ಖ್ಯಾತಿ ವಿಶ್ವಮಟ್ಟಕ್ಕೆ ತಲುಪಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮವನ್ನು ಹೊರಗಿಡುವುದು ಅನ್ಯಾಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.